ನನ್ನ ಕನ್ನಡ ಅಭಿಮಾನ.... ಮತ್ತದಕ್ಕೆ ಸಂದ ಪ್ರತಿಕ್ರಿಯೆ...
ಹೀಗೆ ನನ್ನ ಜೊತೆ ಆದ ಕೆಲವೊಂದು ಘಟನೆಗಳನ್ನ ಬರೆಯೋಣ ಅಂತ ಯೋಚನೆ ಮಾಡಿದಿನಿ.... ನಿಮಗೆ ಅನಿಸಿದ್ದನ್ನಸಂಕೋಚವಿಲ್ಲದೆ ಹೇಳಿ... ನನ್ನ email : ragh007@gmail.com
ಸುಮಾರು ಮೂರೂವರೆ ವರ್ಷಗಳ ಹಿಂದಿನ ಮಾತಿದು... ಹೀಗೆ ಬಸವೇಶ್ವರ ನಗರ ಕೆನರಾ ಬ್ಯಾಂಕಗೆ ಹೋಗಿದ್ದೆ ... ಬೆಂಗಳೂರಿಗೆಬಂದಾಗ ತೆಗೆದ ಪ್ರಥಮ ಉಳಿತಾಯ ಖಾತೆ ಅದು... ಅದರಲ್ಲೇನು ಜಾಸ್ತಿ ರೊಕ್ಕ ಇಟ್ಟಿರಲಿಲ್ಲ... ಆದ್ರು ಬೆಂಗಳೂರಲ್ಲಿ ತೆಗೆದ ಫರ್ಸ್ಟ್ಸೇವಿಂಗ್ಸ್ ಅಕೌಂಟ್ ಅನ್ನೋ ಸೆಂಟಿಮೆಂಟ್ಗೋಸ್ಕರ ಇಟ್ಟಿದ್ದೆ ಅಸ್ಟೆ. ಸರಿ ಒಂದ್ಸಲ ಅಕೌಂಟ್ ಬ್ಯಾಲೆನ್ಸ್ ನೋಡೋಣ ಅಂತ ಚೆಕ್ಮಾಡಿದೆ...200 ರೂಪಾಯಿ ಕಡಿಮೆ ಆಗಿತ್ತು... ಒಳಗಡೆ ಹೋಗಿ ಕ್ಯಾಷಿಯರ್ನ ವಿಚಾರ್ಸಿದೆ.. 'ಯಾಕೆ ಸರ್ ಅಕೌಂಟ್ ಅಲ್ಲಿ 200 ಕಟ್ ಮಾಡಿದಿರಾ ?' ಅಂದೇ... ಅವ್ನು passbook ಇಂದ ಅಕೌಂಟ್ ನಂಬರ್ ನೋಡಿ "ATM ಕಾರ್ಡ್ ಇರೋವ್ರು ಮಿನಿಮಮ್ರೂಪಾಯಿ ಇಡಬೇಕು" ಅಂದಾ. " ಹೌದಾ ಏನ್ ಅಕೌಂಟ್ ಓಪನ್ ಮಾಡೋವಾಗ ಈ ವಿಷಯ ಹೇಳದೇನೆ ಈಗ ಸಡನ್ನಾಗಿಪ್ರತಿ ತಿಂಗಳು ರೊಕ್ಕ ತೆಗ್ಯಾಕತ್ರ ನಮಗ ಹೆಂಗ್ ಗೊತ್ತಾಗಬೇಕ್ರಿ " ಅಂದೇ.... ಅದಕ್ಕವನು "ರೀ ನಮ್ಮ ಜೊತೆ ಏನ ನಿಮ್ಮ ಜಗಳ, ಹೋಗಿ ಮ್ಯಾನೇಜರ್ ಕೇಳಿ" ಅಂದ.. ಅದು ನಿಜ, ಪಾಪ ಅವ ಏನ ಮಾಡ್ಬೇಕ್ ನಮ್ಮ ತಪ್ಪಿಗಿ... ಇನ್ನೇನು ಮಾಡೋದು ಅಂತಯೋಚನೆ ಮಾಡಿ.. ಹೇಗಿದ್ರು 2 ವರ್ಷದಿಂದ ಅಕೌಂಟ್ ಉಪಯೋಗಿಸ್ತಿಲ್ಲ ಕ್ಲೋಸ್ ಮಾಡಿದರಾಯ್ತು ಅಂತ ಡಿಸೈಡ್ ಮಾಡ್ದೆ. ಅವ್ನಿಗೆ "ಸರಿ ಸರ್ ತಪ್ಪ ನಂದೇ.... ಇವಾಗ್ ಅಕೌಂಟ್ ಕ್ಲೋಸ್ ಮಾಡ್ಬೇಕಿತ್ತಲ್ಲ... ಅದಕ್ಕೆ procedure ಏನು ಅಂತ ಹೇಳ್ತಿರ " ಅಂದೇ.. ಮುಂಜಾನೆಯಿಂದ ಹೇಣ್ತಿ ಹತ್ತಿರ ಬಯ್ಸ್ಕೊಂಡ ಬಂದಿದ್ದ ಅನ್ಸುತ್ತೆ, ಸಿಡುಕು ಮೋತಿ ಇಟ್ಕೊಂಡ್ ಕುಂತಿದ್ದ.. "ಆಗೋಲ್ಲಹೋಗಪ ... come on Monday or Tuesday... we won't close accounts on Saturday.. I am very busy.. ಅಕೌಂಟ್ ನಲ್ಲಿ ನೂರು ರೂಪಾಯಿ ಇಟ್ಟಿಲ್ಲ ಇಂತವರಿಗೆ ಅಕೌಂಟ್ ಬೇರೆ ಕೇಳು ಅಂತ " ಕೇವಲವಾಗಿ ಮಾತಾಡಿದ.. ಅಷ್ಟ ಅಂದಿದ್ದೆತಡ ನಂಗು ಸಿಟ್ಟ ಬಂತು.. ಏನ್ ಹೋಗ್ಲಿ ಪಾಪ ಸುಮ್ನೆ ಜಗಳ ಮಾಡ ಬಾರದು ಅಂತ ನಾ ಅನ್ಕೊಂದ್ರ, ತಾನ ಕಾಲ ಕೆದರಕೊಂಡಜಗಳಕ್ಕ ಬರಾ ಕತ್ತಾನ್ಲ ಇವ ಅಂತ ಮನಸನಾಗ ಅನ್ಕೊಂಡು ... "ರೀ ಒಂದೂವರೆ ಸಾವಿರ ನಿಮಗೆ ಒಂದೂ ನೂರು ತರಕಾಣಬಹುದು...ಸುಮ್ನೆ ಕಿರಿಕ್ ಮಾಡ್ದೆ ಅಕೌಂಟ್ ಕ್ಲೋಸ್ ಮಾಡಿ ಕೊಡಿ. ಉಳಿದ ದಿನಾ ನನಗ ಸಿಕ್ಕಾಪಟ್ಟೆ ಕೆಲಸ ಇರತೈತಿ , ಬರಕ್ಕಆಗಂಗಿಲ್ಲ... ಏನಿದ್ರೂ ಶನಿವಾರ ರವಿವಾರ ಮಾತ್ರ ನಾ ಖಾಲಿ... ಅದಕ್ಕ ಏನಿದ್ರೂ ಇವತ್ತೇ ಕೆಲಸ ಆಗಬೇಕ್" ಅಂದೇ... ನೀವುನೋಡಿರ್ಬೇಕ ಬ್ಯಾಂಕ ನಲ್ಲಿ ಕೆಲ್ವೊಂದ ಸಲ ಸಿಕ್ಕಾಪಟ್ಟೆ ಸಿಟ್ಟ ತರಿಸಿಬಿಡ್ತಾರ.. ನಮ್ಮ ರೊಕ್ಕ ನಮಗ ಕೊಡಾಕ ಅವರಪ್ಪನ ಮನಿಗಂಟ ಕೊಟ್ಟಂಗ ಮಾಡ್ತಾರ.. ನಾ ಹಂಗ ಮಾತಾಡಾಕತ್ರು ನನಗ ಕಿಮ್ಮತ ಕೊಡದಾರ್ದ ಬೇರೆಯವರ passbook ತೊಗೊಂಡ... "ಏನ್ರೀ ಲೈನ್ ಅಲ್ಲಿ ನಾ ನಿಂತ ಮಾತಾಡಾಕತ್ತಿನಿ, ನೀವು ನೋಡಿದ್ರ ಬ್ಯಾರೆ ಅವರ passbook ತೊಗೊಂಡ್ ನನ್ನ ಜೋಡಿ ಕಿರಿಕ್ಮಾಡಕತ್ತಿರಲ್ರಿ ?" ಅನುದಕ ಎಕವಚನದಾಗ ಬೆದರ್ಸಿದಾ.. ಅದಕ್ಕ ತಾಳ ಹಾಕ್ತಾ ಅವರ ಮಗ್ಗಲಕಿನಕಿ "ರೀ ನಿಮ್ಗೊಂದ ಸಲಹೇಳಿದ್ರೆ ತಿಳಿಯಲ್ವಾ weekdays ನಲ್ಲಿ ಬನ್ನಿ " ಅಂದ್ಲು.. ನಂಗ ಸಿಟ್ಟ ಬಂದಿದ್ದ ತಡ..." ರೀ ನಾ ನಿಮ್ಮ ಜೊತೆ ಮಾತದಿಡ್ನ, ಇಲ್ಲಾತಾನೆ .. ಹಾಗಿದ್ರೆ ನಿಮ್ಮ ಕೆಲಸ ಮಾಡ್ರಿ... ಮಂದಿ ಉಸಾಬರಿ ನಿಮಗ್ಯಾಕ " ಅಂತ ಅಕಿನ್ಮ್ಯಾಗ ಜೋರ್ ಮಾಡಿದೆ.. 500
ಇನ್ನೇನ ಇವರ ಜೋಡಿ ಮಾತಾಡಿ ಉಪಯೋಗ ಇಲ್ಲಾ ಅಂತ ಗೊತ್ತ ಆದ ಮ್ಯಾಗ, ಮ್ಯಾನೇಜರ್ ರೂಮಿಗೆ ಬಂದೆ, "ಸರ್ ನಾನುಅಕೌಂಟ್ ಕ್ಲೋಸ್ ಮಾಡಬೇಕಾಗಿತ್ತು.. ನಿಮ್ಮ ಕ್ಯಾಷಿಯರ್ ಆಗಲ್ಲ ಅಂತ ಅರ್ಧ ಗಂಟೆ wait ಮಾಡ್ಸಿ ತಕರಾರ್ ಮಾಡಿದ್ದ ಅಲ್ದೆ, ಎಕವಚನದಾಗ ಮಾತಾಡಿ ಜಗಳ ಮಡ್ತಿದಾನ್ ನೋಡ್ರಿ... ಅದಕ್ಕ ನಾನೀಗ ಕಂಪ್ಲೈನ್ ಕೊಡಬೇಕ ಅಂತ ಮಾಡಿನ್ರಿ, ಸ್ವಲ್ಪವಿಚರಿಸ್ತಿರಾ ಅವರನ್ನ, ಹಾಗೆ ನನ್ನ ಅಕೌಂಟ್ ಕ್ಲೋಸ್ ಮಾಡಿಸಿ ಕೊಡಿ ಮತ್ತೆ ನನಗೊಂದು ಪೆನ್ನು ಪೇಪರ್ ಕೊಡಿ " ಅಂತ ಪಟ ಪಟನಮ್ಮ ಉತ್ತರ ಕರ್ನಾಟಕ ಭಾಷೆ ದಾಟಿಯಲ್ಲಿ ಮಾತಾಡಿದೆ... ಅದಕ್ಕ ಮ್ಯಾನೇಜರ್ "ಹೋಗ್ಲಿ ಬಿಡ್ರಿ, ಬೆಳಿಗ್ಗೆ ಇಂದ ಕೆಲಸದಬೇಜಾರಲ್ಲಿ ಒಂದು ಮಾತ್ ಮಾತಡಿರ್ತಾರೆ, ಕಂಪ್ಲೈನ್ ಎಲ್ಲ ಯಾಕೆ .. ನಿಮ್ಮ ಅಕೌಂಟ್ ತಾನೇ, ನಾನ್ ಕ್ಲೋಸ್ ಮಾಡಿಸಿಕೊಡ್ತೀನಿ, ಅಕೌಂಟ್ ಕ್ಲೋಸಿಂಗ್ ರಿಕ್ವೆಸ್ಟ್ ಲೆಟರ್ ಬರಿದ ಕೊಡಿ" ಅಂದ್ರು. "ಸರಿ ಹಾಗಿದ್ರೆ ಅವರಿಗೆ ಸಾರೀ ಕೆಳಕ್ಕೆ ಹೇಳಿ" ಅಂತಹೇಳಿ ಸುಮ್ನಾದೆ.. ಮ್ಯಾನೇಜರ್ ರೂಮಲ್ಲೇ ಕುಂತು ಅಚ್ಚ ಕನ್ನಡದಲ್ಲಿ ಅಕೌಂಟ್ ಕ್ಲೋಸಿಂಗ್ ರಿಕ್ವೆಸ್ಟ್ ಅಪ್ಲಿಕೇಶನ್ ಬರಿದಕೊಟ್ಟೆ... ಒಂದೇ ಒಂದು ಇಂಗ್ಲಿಷ್ ಪದಗಳನ್ನ ಬಳಿಸದೆ, ಸಂಖ್ಯಾ ಸಮೇತ, ಕನ್ನಡದಲ್ಲೇ ಬರೆದೆ.. ಹೇಗೆ ಅಂತಿರ... ಉದಾಹರಣೆಗೆ ಸಬ್ಜೆಕ್ಟ್ಲೈನ್ ಅಲ್ಲಿ " ವಿಷಯ : ಉಳಿತಾಯ ಖಾತೆ ತೆರವುಗೊಳಿಸಿ, ಹಣ ಮರುಪಾವತಿಸುವ ಕುರಿತು ವಿನಂತಿ"... ಹೀಗೆ ಕಛೇರಿಗಳಲ್ಲಿಉಪಯೋಗವಾಗುವ ಶಬ್ದಗಳನ್ನ ಬಳಸಿ, ಖಾತೆ ತೆರವುಗೊಳಿಸುವ ಪತ್ರ ಬರೆದೆ.
ನಾನೇನು ಕನ್ನಡ ಪಂಡಿತನಲ್ಲ..
ಆದರು ಕನ್ನಡ ಅಂದ್ರ ಏನೋ ಅಪಾರ ಭಕ್ತಿ..
ಅದರಲ್ಲಿ ಬರಿಯೋದು ಅಂದ್ರೆ ತುಂಬ ಆಸಕ್ತಿ...
ಕೊನೆ ಸಾರ್ತಿ PUC ನಲ್ಲಿ ಕನ್ನಡ ಪೇಪರ್ ಬರಿದದ್ದ ಬಿಟ್ರ, ಆಮೇಲೆ ಕನ್ನಡದಲ್ಲಿ ಬರಿದಿದ್ದು ಕಡಿಮೆ. ಆದರು ಅವಕಾಶ ಸಿಕ್ಕಾಗಸಾಧ್ಯವಾದಷ್ಟು ಕನ್ನಡದಲ್ಲಿ ಬರೀತೀನಿ, ಆದ ಕಡೇನಲ್ಲ ಕನ್ನಡದಲ್ಲಿ ಮಾತಾಡ್ತೀನಿ.. ಅಷ್ಟರಲ್ಲಿ ಮ್ಯಾನೇಜರ್ ಬಂದಾ.. "ಸರಿತಗೋಳಿ ಸರ್.. ಆಗ್ಲೇ ನಾನ ಬಂದು ೧ ಗಂಟೆ ಆಯಿತು, ಸ್ವಲ್ಪ ಬೇಗನೆ ಕೆಲಸ ಮಾಡಿ ಕೊಟ್ರೆ... ತುಂಬ ಉಪಕಾರವಾಗುತ್ತೆ " ಅಂತಹೇಳಿ ಕೊಟ್ಟೆ.. ನಾನು ಕನ್ನಡದಲ್ಲಿ ಬರಿದಿದ್ದ ನೋಡಿ ಆ ಮ್ಯಾನೇಜರ್ ಎಷ್ಟೊಂದು ಖುಷಿ ಆದಾ ಗೊತ್ತ... " ತುಂಬ ಚೆನ್ನಾಗಿಬರಿದಿಪಾ... ನಂಬರ್ ಕೂಡ ಕನ್ನಡದಾಗ ಬರಿದಿ ಅಲ್ಲ ಭೇಷ... ಸರಿ ಇಲ್ಲೇ ಕುಂತಿರು... 5 ನಿಮಿಷದಲ್ಲಿ ನಿನ್ನ ಕೆಲಸ ಮಾಡಿಸಿಕೊಡ್ತೀನಿ ... " ಅಂತ ಹೇಳಿ ಹೊರಗಡೆ ಹೋಗಿ, ಕ್ಯಾಷಿಯರ್ ಜೊತೆ ಮಾತಾಡಿ ಬಂದ್ರು . ಆಮೇಲೆ ಕಾಫಿ ತರಿಸಿ, "ತಗೊಪ... ನಿನ್ನನೋಡಿದ್ರೆ ಉತ್ತರ ಕರ್ನಾಟಕದವನು ಅನಿಸ್ತಿ .. ಇಲ್ಲಿ ಏನ ಮಾಡ್ಕೊಂದಿದ್ದಿಯ ?" ಅಂತ ಹಾಗೆ ಸುಮ್ನೆ ಮಾತಾಡಕ್ಕೆ ಸ್ಟಾರ್ಟ್ಮಾಡಿದವರು ತಮ್ಮ ಬಗ್ಗೆ ತಮ್ಮ ಮಕ್ಕಳ ಬಗ್ಗೆ ಏನೇನೊ ಹೇಳ್ತಾ .. ಎಷ್ಟೋ ವರ್ಷದ ಪರಿಚಯ ಇರೋ ತರಹ ಮಾತಾಡಕ್ಕೆ ಶುರುಮಾಡಿದ್ರು.. ಆಮೇಲೆ ಕ್ಯಾಷಿಯರ್ ನಾನು ಇದ್ದಲ್ಲಿಗೆ ಬಂದು ದುಡ್ಡು ಕೊಟ್ಟು ಸಾರೀ ಕೂಡ ಕೇಳಿದ.. ನಾನು ಏನೋ ಸಾಧಿಸಿರೋರಥರ ಎದೆ ಉಬ್ಬಿಸಿಕೊಂಡು ನಗುತ್ತ ಬ್ಯಾಂಕನಿಂದ ಹೊರಗಡೆ ಬಂದೆ.. ನಾ ಅನ್ಕೊಂಡೆ ಇನ್ ಕೇಸ್ ಎಲ್ಲರ ತರಹ ನಾನು ಇಂಗ್ಲಿಷ್ನಲ್ಲೆ ಅಕೌಂಟ್ ಕ್ಲೋಸಿಂಗ್ ಅಪ್ಲಿಕೇಶನ್ ಬರೆದು ಕೊಟ್ಟಿದ್ರೆ... ಅದೇ ಮಾಮೂಲು ಮುರಿದು ಕುರ್ಚಿನಲ್ಲಿ ಕುಂತು ಕ್ಯಾಷಿಯರ್ಕೂಗೊವರೆಗೂ ಕುಂತಿರ್ಬೇಕಾಗಿತ್ತು.. ನಿಜವಾದ ಕನ್ನಡ ಅಭಿಮಾನದಿಂದ ನನಗೆ ಜಾಸ್ತಿ ಮರ್ಯಾದೆ ಸಿಕ್ಕಿದ್ದು ಅಲ್ದೆ ನನ್ನ ಕೆಲಸಾನೂಬೇಗನೆ ಆಗೋಯ್ತು.. ಜೊತೆಗೆ ಇನ್ನೊಬ್ಬ ಕನ್ನಡಿಗನ ಸ್ನೇಹ ಸಂಪಾದಿಸಿದೆ.
ಕೊನೇಲಿ ನಾನು ಹೇಳೋದು ಏನಪಾ ಅಂದ್ರೆ... ಸಾಧ್ಯವಾದಷ್ಟು ಕನ್ನಡ ಬಳಸಿ ಹಾಗು ಕನ್ನಡ ಉಳಿಸಿ ... ಹಾಗಂತ ಹೋದಕಡೆಲೆಲ್ಲ ಜಗಳ ಮಾಡಿ, ಬೇರೆ ಭಾಷೆನ ದ್ವೆಷೀಶೋದಾಗ್ಲಿ ಅಥವಾ ಬೇರೆ ರಾಜ್ಯದ ಜನರೊಡನೆ ಜಗಳ ಮಾಡಿ ಅಂತ ಹೇಳ್ತಿಲ್ಲ... ನಾವೆಲ್ಲ ಭಾರತೀಯರು ... ನಾವೆಲ್ಲ ಒಂದೇ... ಅದನ್ನ ನಾವು ಮರೆಯಬಾರದು...ಹಾಗಂತ ಮಾತೃಭಾಷೆಗೆ ಅನ್ಯಾಯ ಮಾಡಬೇಡಿ
ಬೆಂಗಳೂರು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ಸಾಫ್ಟ್ವೇರ್ ಕ್ಯಾಪಿಟಲ್ ಆಗಿ ನಿಲ್ಲೋದಕ್ಕೆ ನಮ್ಮಲ್ಲಿಯ ಇಂಗ್ಲಿಷ್ವ್ಯಾಮೊಹಾನೇ ಕಾರಣವಾಗಿರಬಹುದು, ಹಾಗೇನೆ ಇಂದು ಕನ್ನಡಕ್ಕೆ ಈ ಪರಿಸ್ತಿತಿ ಬಂದಿರೋದು ಇದೇ ಜನರಿಂದ ಅನ್ನೋದು ನನ್ನಅಭಿಪ್ರಾಯ. ಅದಕ್ಕೆ, ನಮ್ಮ ಕನ್ನಡ ಭಾಷೆಯನ್ನ ಉಳಿಸಿ ಬೆಳಿಸಿ ಅನ್ನೋದೇ ನನ್ನ ಕೋರಿಕೆ.. ಸಾದ್ಯವಾದಷ್ಟು ಸಂಕೋಚವಿಲ್ಲದೆನೀವು ಕನ್ನಡದಲ್ಲಿ ಮಾತಾಡಿ, ಕನ್ನಡದಲ್ಲೆ ಬರೆಯಿರಿ ಹಾಗು ಬೇರೆಯವರಿಗೂ ಕಲಿಸಿ... ಇಲ್ಲದಿದ್ರೆ ಒಂದಿನ ಕನ್ನಡ ಮಾತಾಡುಅವರನ್ನ ಬೆಂಗಳೂರು ಬೀದಿಗಳಲ್ಲಿ ಹುಡುಕಾಡುತ್ತ ಹೋಗಬೇಕಾಗಿತು ಹುಷಾರು..!!!!
ಈ ಸಂದರ್ಭದಲ್ಲಿ ನನಗೆ ಕುವೆಂಪು ಅವರ ಒಂದು ಕವಿತೆ ಜ್ಞಾಪಕಕ್ಕೆ ಬರ್ತಿದೆ..
ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವ!
ಸತ್ತಂತಿಹರನು ಬಡಿದೆಚ್ಚರಿಸು;
ಕಚ್ಚಾಡುವರನು ಕೂಡಿಸಿ ಒಲಿಸು.
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು;
ಒಟ್ಟಿಗೆ ಬಾಳುವ ತೆರದಲಿ ಹರಸು!
ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವ!
ಕ್ಷಯಿಸೆ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿಮತಿಯಲ್ಲಿ;
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ!
ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವ!
-ಕುವೆಂಪು
"ಕನ್ನಡವೇ ಸತ್ಯ, ಕನ್ನಡವೇ ನಿತ್ಯ."
"ಜೈ ಕರ್ನಾಟಕ."
ಹೂವೊಂದು ಬಳಿಬಂದು ತಾಕಿತು ಎನ್ನೆದೆಯಾ
ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿ ನುಡಿಯಾ, ಜೇನಂಥ ಸಿಹಿ ನುಡಿಯಾ
ಹೂವೊಂದು ಬಳಿಬಂದು ತಾಕಿತು ಎನ್ನೆದೆಯಾ
ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿ ನುಡಿಯಾ, ಜೇನಂಥ ಸಿಹಿ ನುಡಿಯಾ
ಕಾವೇರಿ ಸೀಮೆಯ ಕನ್ಯೆಯು ನಾನೂ, ಬೇಲೂರು ಬಾಲೆಯ ಪ್ರತಿನಿಧಿ ನಾನೂ
ತುಂಗೆಯ ಭದ್ರೆಯಾ, ತುಂಗೆಯ, ಭದ್ರೆಯಾ, ತೌರಿನ ಹೂ ನಾನು, ತೌರಿನ ಹೂ ನಾನು
ಹೂವೊಂದು ಬಳಿಬಂದು ತಾಕಿತು ಎನ್ನೆದೆಯಾ
ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿ ನುಡಿಯಾ, ಜೇನಂಥ ಸಿಹಿ ನುಡಿಯಾ
ಸೂರ್ಯನ ಕಾಂತಿಯ ಸುಂದರಿ ನಾನು ತಿಂಗಳ ಬೆಳಕಿನ ತಂಗಿಯು ನಾನೂ
ಪ್ರೇಮದ, ಕಾವ್ಯಕ್ಕೆ, ಪ್ರೇಮದ, ಕಾವ್ಯಕ್ಕೆ, ಪೂಜೆಯ ಹೂ ನಾನೂ, ಪೂಜೆಯ ಹೂ ನಾನೂ
ಹೂವೊಂದು ಬಳಿಬಂದು ತಾಕಿತು ಎನ್ನೆದೆಯಾ
ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿ ನುಡಿಯಾ, ಜೇನಂಥ ಸಿಹಿ ನುಡಿಯಾ